ವಾಸ್ತು ಅಳವಡಿಸಿದ ಮನೆಯ ನಕ್ಷೆಗಳು
"ವಾಸ್ತು ಅಳವಡಿಸಿ ಮನೆಯ ನಕ್ಷೆಯನ್ನ ತಯಾರಿಸಲು ಕಾರಣ ಮತ್ತು ವಾಸ್ತು ಅಳವಡಿಸಿದ ನಕ್ಷೆಯ ಮಾದರಿಗಳು" ಮಾನವನ ಬದುಕುವ ರೀತಿ ಪೂರ್ವದಲ್ಲಿ ಹೇಗಿತ್ತು? ಈಗ ಹೇಗಿದೆ? ಇನ್ನೂ ಮುಂದೆ ಹೇಗಿರಬಹುದು? ಎಂದು ಒಮ್ಮೆ ಯೋಚಿಸಿದರೆ ಈಗಾಗಲೇ ಅಜದಿಂದ ಗಜದಷ್ಟು ಪರಿವರ್ತನೆ ಕಂಡ ಇದು ಇನ್ನೂ ಮುಂದೆ ಇನ್ನೇನಕ್ಕೆ ಹೋಲಿಸುವಷ್ಟು ಪರಿವರ್ತನೆ ಕಾಣಬಹುದು? ಒಟ್ಟು ಕುಟುಂಬದ ಬದುಕು ಈಗ ಕಾಣಸಿಗುವುದೇ ಅಪರೂಪವಾಗಿದೆ. ಈ ಬದಲಾವಣೆಗೆ ಕಾರಣಗಳು ಹಲವಿರಬಹುದು. ಆದರೆ ಈ ಒಡಕಿಗೆ ಮೂಲ ಕಾರಣ ಜನರು ಆಧುನಿಕತೆಯಲ್ಲಿ ತಮ್ಮನ್ನು ತಾವು ಕಳೆದುಕೊಂಡಿರುವುದು. ಜನರು ಮೈಮುರಿದು ದುಡಿದು ಅಂಬಲಿ ಉಂಡು ಕಣ್ತುಂಬಾ ನಿದ್ರಿಸುತಿದ್ದ ಆ ಕಾಲವೆಲ್ಲಿ, ಜನರು ಮೈಮುರಿಯದೇ ದುಡಿದು ಮೃಷ್ಠಾಹ್ನ ಉಂಡು ನಿದ್ರೆ ಮಾತ್ರೆ ಸೇವಿಸಿದರೂ ಕಣ್ಮುಚ್ಚಿ ಕ್ಷಣಕಾಲವೂ ನಿದ್ರಿಸಲಾಗದ ಈ ಕಾಲವೆಲ್ಲಿ, ಜನರು ಒತ್ತಡವನ್ನೇ ಮಣಿಸುತ್ತಿದ್ದ ಆ ಕಾಲವೆಲ್ಲಿ, ಒತ್ತಡಕ್ಕೇ ಜನರೇ ಮರಣಿಸುತ್ತಿರುವ ಈ ಕಾಲವೆಲ್ಲಿ, ಇಷ್ಟೆಲ್ಲಾ ಒತ್ತಡ ಅನುಭವಿಸಿಯೇ ಜನರು ಜೀವನಸಾಗಿಸಿದರೂ ಇಲ್ಲಿ ...