ಮಣ್ಣು ಪರೀಕ್ಷೆ (Soli Test)



                                             


                                              ಮನೆ ಕಟ್ಟಲು ಎಲ್ಲಾ ರೀತಿಯಿಂದಲೂ ಯೋಗ್ಯವಾದ  ಜಾಗವನ್ನು ಆರಿಸಿಕೊಂಡ ನಂತರದ ಕೆಲಸವೇ ಆ ಜಾಗದ ರೋಡಿಗೆ ಸರಿ ಹೊಂದುವಂತೆ ಮತ್ತು ನಿಮ್ಮ ಕುಟುಂಬಕ್ಕೆ ಸರಿ ಹೊಂದುವಂತಹ ನಿವು ನಿಭಾಯಿಸಬಲ್ಲ ಖರ್ಚಿನಲ್ಲೇ ಪೂರ್ಣಗೊಳ್ಳುವಂತಹ ಮನೆಯ ನಕ್ಷೆಯನ್ನ ತಯಾರಿಸಿಕೊಳ್ಳಬೇಕು. ನೀವು ಮನೆಯ ನಕ್ಷೆ ತಯಾರಿಸುವಾಗ ವಾಸ್ತು ಅಳವಡಿಸಿಯೇ ತಯಾರಿಸಿಕೊಂಡರೆ ಮುಂದೆ ಇದು ನಿಮಗೆ  ನೆಮ್ಮದಿಯಿಂದ ಜೀವನ ನಡೆಸಲು ಶತಪ್ರತಿಶತ ಸಹಾಯವಾಗುವುದರಲ್ಲಿ ಎರಡು ಮಾತಿಲ್ಲ.

                                           ಮನೆಯ ಅಡಿಪಾಯಕ್ಕೆ ಸಂಬಂಧಿಸಿದ ನಕ್ಷೆ ತಯಾರಿಸುವ ಮೊದಲು ಅದಕ್ಕೆ ಪೂರಕವಾಗುವ ಕೆಲವು ಪರೀಕ್ಷೆಗಳನ್ನು ಮಾಡಿಸಬೇಕು. ಅದರಲ್ಲಿ ಒಂದು ಮಣ್ಣು ಪರೀಕ್ಷೆ (Soil Test), ಈ ಮಣ್ಣು ಪರೀಕ್ಷೆ (Soil Test) ಸಾಮಾನ್ಯವಾಗಿ ಸಿವಿಲ್ ಲ್ಯಾಬ್ ನವರಿಂದ ನಡೆಯುತ್ತದೆ,ಇವರು ಕೆಲವು ಲ್ಯಾಬ್ ಉಪಕರಣಗಳನ್ನು ಬಳಸಿ ಮಣ್ಣಿನ ಗಟ್ಟಿತನವನ್ನು ಕಂಡುಹಿಡಿಯುತ್ತಾರೆ ಮತ್ತು ಇದನ್ನ Soil SBC ಎಂದು ಹೆಸರಿಸುತ್ತಾರೆ. ಈ ಪರೀಕ್ಷೆಯ ಫಲಿತಾಂಶ ಅಲ್ಲಿ ಸಿಗುವ ಮಣ್ಣಿನ ಗುಣಧರ್ಮವನ್ನು ಸೂಚಿಸುತ್ತದೆ. ಕಪ್ಪು ಮಣ್ಣು, ಕೆಂಪು ಮಣ್ಣು, ಕಲ್ಲು ಮಿಶ್ರಿತ ಮಣ್ಣು, ಮೆದು ಕಲ್ಲು, ಗಟ್ಟಿ ಕಲ್ಲು ಹೀಗೆ ಹಲವು ವಿಧದ ಮಣ್ಣು ಮತ್ತು ಕಲ್ಲಿಗೆ ಅದರದೇ ಆದ ಫಲಿತಾಂಶಗಳು ದೊರೆಯುತ್ತವೆ. ಇಲ್ಲಿ ಬರುವ ಫಲಿತಾಂಶವನ್ನೇ ಆಧಾರವಾಗಿಟ್ಟುಕೊಂಡು ಮನೆಯ  ಅಡಿಪಾಯದ ನಕ್ಷೆಯನ್ನ ರೂಪಿಸುವುದು. ಈ ಪರೀಕ್ಷೆಯನ್ನ ಮನೆ ಕಟ್ಟುವ ಜಾಗದಲ್ಲಿ, ಪರೀಕ್ಷಿಸುವ ಜಾಗ, ಕಟ್ಟುವ ಮನೆಯ ಮಧ್ಯೆ ಬರುವಂತೆ ಮಾಡಿ ಅಲ್ಲಿ ಪರೀಕ್ಷಿಸಬೇಕು. ನೀವು ಈ ಮಣ್ಣು ಪರೀಕ್ಷೆಯನ್ನ (Soil Test) ಲ್ಯಾಬ್ನಿಂದ ನಡೆಸಿದರೆ ಅದರದೇ ನಿಗದಿ ಆದ ಹಣವನ್ನ ವ್ಯಯಿಸಬೇಕಾಗುತ್ತದೆ. 

                                                ಈ ಕೆಳಗೆ ತಿಳಿಸಿದ ವಿಧಾನವನ್ನು ಬಳಸಿ ಮಣ್ಣು ಪರೀಕ್ಷೆಯನ್ನು (Soil Test) ನಿವೇ ಸ್ವತಃ ಯಾವುದೇ ಲ್ಯಾಬಿನ ಸಹಾಯವಿಲ್ಲದೇ ಯಾವುದೇ ಲ್ಯಾಬಿನ ಉಪಕರಣವನ್ನು ಬಳಸದೇ ಮಣ್ಣಿನ ಗಟ್ಟಿತನವನ್ನು ಪರೀಕ್ಷಿಸಿ ಅಡಿಪಾಯದ ನಕ್ಷೆಯನ್ನು ತಯಾರಿಸಬಹುದು. ಈ ವಿಧಾನದಲ್ಲಿ ಪರೀಕ್ಷೆಯ ಫಲಿತಾಂಶ ನಿಖರವಾಗಿರುತ್ತದೆ. 

ಈ ಪರೀಕ್ಷೆಯ ವಿಧಾನ ಹೀಗಿದೆ ಃ- 

                                                      ಮೊದಲು ನೀವು ಮನೆ ಕಟ್ಟುವ ಜಾಗದಲ್ಲಿ ಪರೀಕ್ಷಿಸುವ ಜಾಗ, ಕಟ್ಟುವ ಮನೆಯ ಮಧ್ಯೆ ಬರುವಂತೆ ಮಾಡಿ 5 X 5 ಅಡಿ ಮಾರ್ಕಮಾಡಿ ಇಲ್ಲಿ 5 ಅಡಿ ಆಳದ ಗುಂಡಿ ತೆಗೆಯಿರಿ, ನೀವು ಗುಂಡಿಯನ್ನು ಯಾವುದೇ ಯಂತ್ರಗಳನ್ನು ಉಪಯೋಗಿಸದೆ ತೆಗೆದರೆ ನಿಖರ ಫಲಿತಾಂಶ ದೊರೆಯುವುದು. ಗುಂಡಿ ತೆಗೆಯುವಾಗ ಮಧ್ಯದಲ್ಲಿ ಪಿಕಾಸಿಯ ಮೊನಚು ಅರ್ದ ಇಂಚೂ ಇಳಿಯದಷ್ಟು ಗಟ್ಟಿ ಸಿಕ್ಕರೆ 5 ಅಡಿ ತೆಗೆಯುವ ಬದಲು ಅಲ್ಲೇ ನಿಲ್ಲಿಸಿ ಪರೀಕ್ಷೆ ಮಾಡಬಹುದು. ಗುಂಡಿಯ ತಳದಲ್ಲಿ ಯಾವುದೇ ಸಡಿಲ ಮಣ್ಣುಗಳು ಇರದಂತೇ ಚೊಕ್ಕಮಾಡಿ, ಮುಸ್ಸಂಜೆಯ ಸಮಯದಲ್ಲಿ ಆ ಗುಂಡಿಯಲ್ಲಿ ಒಂದು ಅಡಿ ಮೂರು ಇಂಚಿನಷ್ಟು(1'-3") ಶುದ್ಧವಾದ ನೀರನ್ನು ತುಂಬಿ ಆ ಗುಂಡಿಯನ್ನು ಹಲಗೆಗಳನ್ನು ಬಳಸಿ ಮುಚ್ಚಿಡಿ. ಮಾರನೇ ದಿನ ಮುಂಜಾನೆ ಸರಿಯಾಗಿ ನೀವು ನೀರುತುಂಬಿದ ಸಮಯದಿಂದ 12 ಘಂಟೆಗಳು ಕಳೆದ ಬಳಿಕ ಅಂದರೆ ಉದಾಹರಣೆಗೆ ಮುಸ್ಸಂಜೆ 7 ಘಂಟೆಗೆ ನೀರು ತುಂಬಿದರೆ ಮರುದಿನ ಮುಂಜಾನೆ 7 ಘಂಟೆಗೆ ಮುಚ್ಚಿದ ಹಲಗೆಗಳನ್ನು ತೆಗೆದು ಗುಂಡಿಯಲ್ಲಿ ಇಂಗದೇ ಉಳಿದುಕೊಂಡ ನೀರಿನ ಮಟ್ಟವನ್ನು ಪರೀಕ್ಷಿಸಿ. ಗುಂಡಿಯಲ್ಲಿದ್ದ ನೀರು ಕಾಲುಭಾಗ ಮಾತ್ರ ಇಂಗಿದ್ದಲ್ಲಿ ಭೂಮಿ ಮನೆಕಟ್ಟಲು ಅತ್ಯುತ್ತಮವೆಂದೂ, ಗುಂಡಿಯಲ್ಲಿ  ಕಾಲುಭಾಗ ಮಾತ್ರ ನೀರು ಉಳಿದುಕೊಂಡಲ್ಲಿ  ಭೂಮಿ ಮನೆಕಟ್ಟಲು ಉತ್ತಮವೆಂದೂ, ಸ್ವಲ್ಪ ನೀರು  ತೇವದ ಜೊತೆಗಿದ್ದರೆ   ಭೂಮಿ ಮನೆಕಟ್ಟಲು ಸಾಧಾರಣವೆಂದೂ, ನೀರು ಪೂರ್ತಿಯಾಗಿ ಇಂಗಿ ಬಿರುಕುಗಳು ಒಡೆದಿದ್ದರೆ ಕನಿಷ್ಠವೆಂದೂ ಅರ್ಥೈಸಬಹುದು. ಈ ಮಣ್ಣು ಪರೀಕ್ಷೆಯನ್ನೇ ಆಧಾರವಾಗಿಟ್ಟುಕೊಂಡು ಮನೆಯ ಅಡಿಪಾಯದ ನಮೂನೆ ಮತ್ತು ಉದ್ದ ಅಗಲ ಆಳವನ್ನು ನಿರ್ಧರಿಸಬಹುದು.





                       

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಡಿಮೆ ಖರ್ಚಿನಲ್ಲಿ ಮನೆ

ಕಟ್ಟಡದ ಅಡಿಪಾಯ

ಕನಸಿನ ಮನೆ