ಕಟ್ಟಡದ ಅಡಿಪಾಯ
"ಕಟ್ಟಡದ ಅಡಿಪಾಯದ ವಿಧಗಳು"
ಮನೆ ಅಥವಾ ಕಟ್ಟಡ ಕಟ್ಟುವಾಗ ತೆಗೆದುಕೊಳ್ಳುವ ಮುಂಜಾಗ್ರತೆಗಳಲ್ಲಿ ಅತಿ ಮುಖ್ಯವಾಗಿ ಮುಂಜಾಗ್ರತೆ ತೆಗೆದುಕೊಂಡು ಮಾಡುವ ಕೆಲಸವೆಂದರೆ ಅಡಿಪಾಯ,ಫೌಂಡೇಶನ್ , ಬುನಾದಿ ಹಾಕುವುದು. ಈ ಮನೆ ಕಟ್ಟಡಗಳು ಮಾನವ ನಿರ್ಮಿತವಾದ್ದರಿಂದ ಇವುಗಳ ಬುನಾದಿಯನ್ನೂ ಸಹ ಇವು ಗಟ್ಟಿಯಾಗಿ ನಿಂತು ಯಾವ ಪ್ರಕೃತಿ ವಿಕೋಪಕ್ಕೂ ಹಾನಿಯಾಗದಂತೆ ರೂಪಿಸಬೇಕಾಗುತ್ತದೆ. ಒಂದು ಮರ ಬಾಗಿಯೂ ತನ್ನನ್ನು ತಾನು ಬೀಳದಂತೆ ಸಂರಕ್ಷಿಸಿಕೊಳ್ಳುವುದು ಪ್ರಕೃತಿದತ್ತ. ಒಂದು ಕಟ್ಟಡ ಬಾಗಿಯೇ ನಿಲ್ಲುವಂತೆ ಮಾಡುವುದು ಮಾನವ ಕೌಶಲ್ಯ. ನೀವು ಬುನಾದಿಯನ್ನು ಯಾವುದರ ಮೇಲೆ ಕಟ್ಟುತ್ತೀರಿ? ಭೂಮಿಯ ಮೇಲೇ. ಆದರೆ ಇದರ ಗಟ್ಟಿತನವೂ ಈ ಬುನಾದಿಯ ಭಾರಹೊರುವಾಗ ಪ್ರಮುಖ ಪಾತ್ರ ವಹಿಸಲೇಬೇಕು.
ನಮಗೆ ಭೂಮಿಯನ್ನು ಅಡಿಪಾಯಕ್ಕಾಗಿ ಅಗೆಯುವಾಗ ಹಲವುರೀತಿಯ ಒಳತನದ ದರ್ಶನವಾಗುತ್ತದೆ. ಇವುಗಳಲ್ಲಿ ಕಪ್ಪುಮಣ್ಣು, ಮೆಕ್ಕಲು ಮಣ್ಣು, ಜೇಡಿ ಮಣ್ಣು, ಶೇಡಿ ಮಣ್ಣು, ಬೆಣಚು ಮಿಶ್ರಿತ ಮಣ್ಣು, ಉಸುಕು ಮಿಶ್ರಿತ ಮಣ್ಣು, ಹರಳು ಮಿಶ್ರಿತ ಮಣ್ಣು, ಗೊಬ್ಬರ ಮಿಶ್ರಿತ ಮಣ್ಣು, ಕೆಂಪು ಮಣ್ಣು, ಮೆದು ಕಲ್ಲು, ಕೆಂಪುಕಲ್ಲು, ಶಿಲೆಗಳು ಹೀಗೆ ಹಲವು ರೀತಿ ಮಣ್ಣಿನ, ಕಲ್ಲಿನ ನಮೂನೆಗಳು ಕಾಣಸಿಗುತ್ತವೆ. ಇವುಗಳ ಗಟ್ಟಿತನ ಮತ್ತು ಸ್ವಭಾವ ಒಂದಕ್ಕಿಂತ ಒಂದು ವಿಭಿನ್ನವಾಗಿರುತ್ತದೆ. ಹಾಗಾಗಿ ಮನೆ ಅಥವಾ ಕಟ್ಟಡ ಕಟ್ಟುವಾಗ ಕಟ್ಟುವ ಜಾಗದ ಮಣ್ಣಿನ ಗಟ್ಟಿತನವನ್ನು ಪರೀಕ್ಷೆ ಮಾಡುವುದು. ಇದನ್ನು ಕೆ,ಜಿ/ಸಿ.ಎಮ್ ಸ್ಕ್ವೇರ್ನಲ್ಲಿ ಹೇಳುವುದಾದರೆ 0.5 ಕೆ,ಜಿ/ಸಿ.ಎಮ್ ಸ್ಕ್ವೇರ್ ದಿಂದ ಶುರುವಾಗುವ ಇದು 33 ಕೆ,ಜಿ/ಸಿ.ಎಮ್ ಸ್ಕ್ವೇರ್ ನಿಂದ ಮೇಲ್ಪಟ್ಟೂ ಇರುತ್ತದೆ. ಇವುಗಳನ್ನೇ ಆಧಾರವಾಗಿ ಇಟ್ಟುಕೊಂಡು ಮನೆಯ ಅಥವಾ ಕಟ್ಟಡದ ಬುನಾದಿಯ ಆಳ,ಅಗಲ,ದಪ್ಪಗಳನ್ನು ನಿರ್ಣಯಿಸುವುದು.
ಮನೆ ಅಥವಾ ಕಟ್ಟಡದಿಂದ ಬರುವ ಒತ್ತಡ ಅಥವಾ ಭಾರದ ಆಧಾರದಮೇಲೆ ಈ ಜಾಗ ಎಷ್ಟು ಭಾರ ಹೊರಬಹುದು ಎಂದು ನಿರ್ಣಯಿಸಿ ಬರುವ ಭಾರವನ್ನು ಭೂಮಿಯಮೇಲೆ ಅವಶ್ಯಕತೆಗೆ ತಕ್ಕಂತೆ ಹರಡಿ ಹಂಚುವ ನಿಯಮವನ್ನು ಅನುಸರಿಸುತ್ತಾರೆ. ಇದೂ ಸಾಕೆನಿಸದಾಗ ಭೂಮಿಯಲ್ಲಿನ ಗಟ್ಟಿತನ ಹುಡುಕುತ್ತಾ ಆಳಕ್ಕಿಳಿಯುತ್ತಾರೆ. ಇದರಿಂದಾಗಿಯೇ ಹಲವುರೀತಿಯ ಫೌಂಡೇಶನ್ ಮತ್ತು ಫೂಟಿಂಗಳು ಹುಟ್ಟಿಕೊಂಡಿರುವುದು.
ಹಿಂದಿನ ದಿನಮಾನಗಳಲ್ಲೂ ಸಹ ಮಾನವನು ದೊಡ್ಡದಾದ ಕಟ್ಟಡಗಳನ್ನು ಕಟ್ಟುತ್ತಿದ್ದ, ಈ ಕಟ್ಟಡಗಳು ಎಲ್ಲಾ ರೀತಿಯ ಭಾರ ಹೊರುವಂತೆ ಮಾಡಿಯೇ ನಿರ್ಮಿಸುತ್ತಿದ್ದ, ಹಿಂದಿನ ದಿನಮಾನಗಳಲ್ಲಿ ಹಾಕುತ್ತಿದ್ದ ಅಡಿಪಾಯಕ್ಕೂ ಇಂದಿನ ದಿನಮಾನದ ಅಡಿಪಾಯಕ್ಕೂ ಅಜಗಜಾಂತರವಿದೆ, ಹಿಂದೆ ಅಡಿಪಾಯಕ್ಕೆ ಕಬ್ಬಿಣದ ಸರಳುಗಳನ್ನ ಬಳಸುತ್ತಿರಲಿಲ್ಲ,ಸಿಮೆಂಟ್ ಬಳಸುತ್ತಿರಲಿಲ್ಲ, ಶಟರಿಂಗ್ ಮಾಡುತ್ತಿರಲಿಲ್ಲ, ಫುಟಿಂಗ್ ಹಾಕುತ್ತಿರಲಿಲ್ಲ, ಕೊಂಕ್ರೀಟ್ ಬೀಮ್ ಗಳನ್ನು ಬಳಸುತ್ತಿರಲಿಲ್ಲ, ಹೀಗಿದ್ದರೂ ಇಂದಿನವರು ನಾಚುವಂತೇ ಗಟ್ಟಿಯಾದ ಸುಧೃಡವಾದ ಅಡಿಪಾಯವನ್ನು ಕಲ್ಲು ಬಂಡೆಗಳನ್ನೇ ಬಳಸಿ ಮಣ್ಣಿನ ಅಡಿಯಲ್ಲಿಯೂ ಸಹ ಸಹಸ್ರ ವರ್ಷಕ್ಕಿಂತೂ ಅಧಿಕ ಬಾಳುವಂತೆ ಅಡಿಪಾಯವನ್ನು ನಿರ್ಮಿಸುತ್ತಿದ್ದರು,
ಇವರೂಸಹ ಅಡಿಪಾಯ ಹಾಕುವ ಮೊದಲು ಅಡಿಪಾಯ ಹಾಕುವ ಜಾಗದ ಮಣ್ಣಿನ ಗಟ್ಟಿತನವನ್ನು ಯಾವುದೇ ಯಂತ್ರಗಳ ಸಹಾಯವಿಲ್ಲದೇ ಪರೀಕ್ಷಿಸುತ್ತಿದ್ದರು. ಈ ಮಣ್ಣು ಪರೀಕ್ಷೆಯ ಬಳಿಕ ಅದರ ಗಟ್ಟಿತನಕ್ಕೆ ಅನುಗುಣವಾಗಿ ಅಡಿಪಾಯದ ಗುಂಡಿ ತೆಗೆದು ಇವುಗಳಲ್ಲಿ ವರ್ಷಪರ್ಯಂತ ನೀರು ನಿಲ್ಲುವಂತೇ ಮಾಡುತ್ತಿದ್ದರು, ಇವರು ಬಳಸುತ್ತಿದ್ದುದು ಮಾಸ್ ಫೌಡೇಶನ್ ಸಿಸ್ಟಂಮ್ ಅಂದರೆ ನಾವು ಈಗ ಬಳಸುತ್ತಿರುವ ರೇಫ್ಟ ಫೌಡೇಶನ್ ಇದ್ದಂತೆ,ಆದರೆ ಈ ರೇಫ್ಟ ಫೌಡೇಶನ್ ಗೆ ಇವರು ಬಳಸುತ್ತಿದ್ದುದು ಮುಖಮಾಡಿದ ದೊಡ್ಡ ಬಂಡೆಗಳನ್ನ, ತಮಗೆ ಬೇಕಾದ ಉದ್ದ ಅಗಲ ಎತ್ತರಕ್ಕೆ ಅನುಗುಣವಾಗಿ ಸಂಪೂರ್ಣ ಪಾಯವನ್ನು ಬಳಸಿಕೊಂಡು ಅವುಗಳಲ್ಲಿ ಮುಖಮಾಡಿದ ಬಂಡೆಗಳನ್ನು ಹಂತವಾಗಿ ನೇರ ಜೊಯಿಂಟ್ ಬರದಂತೇ ಸುಣ್ಣದ ಎರಕ ಬಳಸಿ ಜೋಡಿಸಿ ಅಡಿಪಾಯದ ನಿರ್ಮಾಣ ಮಾಡುತ್ತಿದ್ದರು,
ಇಂದಿನ ದಿನಗಳಲ್ಲಿನ ಅಡಿಪಾಯಗಳನ್ನು ಕಟ್ಟಡವನ್ನು ಕಟ್ಟುವ ಜಾಗ ಮತ್ತು ಕಟ್ಟಡದಿಂದ ಅಡಿಪಾಯಕ್ಕೆ ಬರುವ ಭಾರ ಇದಕ್ಕನುಗುಣವಾಗಿ ಸೈಜ್ ಕಲ್ಲುಗಳನ್ನು ಬಳಸಿ ಮತ್ತು ಹಲವು ವಿಧಗಳಲ್ಲಿ ಕೊಂಕ್ರೀಟ್ ಸ್ಟೀಲ್ ಬಳಸಿ ಫೌಡೇಶನ್ ಹಾಕುವುದು ರೂಡಿಯಲ್ಲಿದೆ,
ಇಂದಿನ ದಿನಗಳಲ್ಲಿ ಬಳಸುವ ಕೆಲವು ಅಡಿಪಾಯದ ಮಾದರಿಗಳು ಈ ಕೆಳಗಿವೆ.









ಕಾಮೆಂಟ್‌ಗಳು