ಕಡಿಮೆ ಖರ್ಚಿನಲ್ಲಿ ಮನೆ
" ಕಡಿಮೆ ಖರ್ಚಿನಲ್ಲಿ ಮನೆ ಕಟ್ಟಿಕೊಳ್ಳುವ ವಿಧಾನ ಮತ್ತು ಮನೆಯ ನಕ್ಷೆಗಳು"
ನೀವೇ ಸ್ವತಃ ನಿಮ್ಮ ಮನೆಯನ್ನು ಕಟ್ಟಿಕೊಳ್ಳುವಾಗ ಹೇಗೆಲ್ಲಾ ಉಳಿತಾಯ ಮಾಡಿ, ಅಥವಾ ಕಡಿಮೆ ವೆಚ್ಚದಲ್ಲಿ ಮನೆ ಕಟ್ಟಿ, ಇದು ಒಂದು ಲೋ ಬಜೆಟ್ ಹೌಸ್ ಎಂದು ಹೆಸರಿಸಬಹುದು ಎಂಬುವುದರ ಬಗ್ಗೆ ಯೋಚಿಸುವುದಾದರೆ, ಈ ಉಳಿಸುವ ಕ್ರಿಯೆಯನ್ನ ಪ್ರಾರಂಭಮಾಡುವುದು ನೀವು ಮನೆಕಟ್ಟಲು ಯೋಚಿಸಿದ ಕ್ಷಣದಿಂದಲೇ. ಇಲ್ಲಿ ಮನೆಕಟ್ಟುವ ಜಾಗದ ಆಯ್ಕೆಯನ್ನು ಆ ಜಾಗದ ಖರೀದಿಗೆ ಬರುವ ಖರ್ಚುನ್ನು ಈ ಉಳಿತಾಯದ ಕ್ರಿಯೆ ಒಳಗೊಂಡಿರುವುದಿಲ್ಲ. ಇದು ಮನೆಕಟ್ಟುವಾಗ ನೀವು ತಯಾರಿಸಿಕೊಳ್ಳುತ್ತಿರುವ ನಕ್ಷೆಯಿಂದ ಪ್ರಾರಂಭವಾಗಿ ಮನೆಯ ಪ್ರವೇಶ ಮಾಡುವವರೆಗಿನ ಖರ್ಚುಗಳಲ್ಲಿ ಮಾತ್ರ ಉಳಿಸುವಕ್ರಿಯೆ. ನೀವು ಮನೆಕಟ್ಟುವ ಜಾಗವನ್ನು ಆಯ್ಕೆಮಾಡುವಾಗ ಏನೆಲ್ಲಾ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಬೇಕು ಮತ್ತು ಆ ಜಾಗ ಹೇಗಿರಬೇಕು ಎನ್ನುವುದರ ಬಗ್ಗೆ ಇಲ್ಲಿ ವಿವರಿಸಲಾಗಿದೆ.
ಈ ಲೋ ಬಜೆಟ್ ಹೌಸ್ ನಲ್ಲಿ ಮನೆಕಟ್ಟುವ ನಕ್ಷೆ ತಯಾರಿಸುವಾಗ ಮೊದಲು ಯೋಚಿಸಬೇಕಾಗಿರುವುದು ಮನೆಯ ಪ್ಲಿಂತ್ ಏರಿಯಾದ ವಿಸ್ತೀರ್ಣದ ಮೇಲೆ. ಇದು ಅವಲಂಬಿಸಿರುವುದು ನಿಮ್ಮ ಕುಟುಂಬದ ಮೇಲೆ. ನೀವು ನಿಮ್ಮ ಕುಟುಂಬಕ್ಕೆ ತಕ್ಕಷ್ಟು ಜಾಗವನ್ನು ಯಾವುದೇ ಜಾಗ ನಿಷ್ಪ್ರಯೋಜಕವಾಗದಂತೆ ಉಪಯೋಗಿಸಿಕೊಂಡು ಪ್ಲಿಂತ್ ಏರಿಯಾದ ಒಳಗಡೆ ಬರುವ ಎಲ್ಲಾ ಜಾಗವನ್ನೂ ಸರಿಯಾಗಿ ಸದುಪಯೋಗಪಡಿಸಿಕೊಂಡು ಮನೆನಿರ್ಮಾಣ ಮಾಡಬೇಕಗುತ್ತದೆ. ಇಲ್ಲಿ ನೀವು ಗಣನೆಗೆ ತೆಗೆದುಕೊಳ್ಳಬೇಕಾದ ಅಂಶಗಳೆಂದರೆ, ಮುಖ್ಯ ವಾಸಕೋಣೆಯ ಉದ್ದಗಲ, ಶಯನ ಕೊಠಡಿಗಳ ಸಂಖ್ಯೆ ಮತ್ತು ಅವುಗಳ ಉದ್ದಗಲ, ಊಟದ ಕೊಣೆ ಮತ್ತು ಅಡಿಗೆಮನೆಯ ಉದ್ದಗಲ, ಸಂಗ್ರಹ ಕೋಣೆ ಮತ್ತದರ ಉದ್ದಗಲ,,ಶೌಚಾಲಯ ಮತ್ತು ಸ್ನಾನದ ಕೋಣೆಗಳ ಸಂಖ್ಯೆ ಅವುಗಳ ಉದ್ದಗಲ, ಓದುವ ಕೋಣೆಗಳ ಸಂಖ್ಯೆ ಅದರ ಉದ್ದಗಲ, ಪೂಜಾ ಕೋಣೆಯ ಉದ್ದಗಲ, ಮೇಲಾವರಣದ ಉದ್ದಗಲ, ಅಡಿಪಾಯದ ಎತ್ತರ, ಒಳನೆಲದಿಂದ ಸ್ಲಾಬ್ನ ಎತ್ತರ ಇವೆಲ್ಲದರ ಬಗ್ಗೆ ತರ್ಕಿಸಿ ಯೋಚಿಸಿ ಒಂದು ನಕ್ಷೆ ತಯಾರಿಸಿಕೊಳ್ಳಬೇಕಾಗುತ್ತದೆ.
ನೀವು ಮನೆ ಕಟ್ಟುವಾಗ ನೆಲಮಹಡಿ ಮತ್ತು ಮೊದಲ ಮಹಡಿ ಇವೆರಡನ್ನೇ ಕಟ್ಟುವ ಯೋಚನೆ ಇದ್ದಲ್ಲಿ ಮನೆಯ ಫೌಂಡೇಶನ್ ಹಾಕುವಾಗ ಫುಟಿಂಗ್ ಮತ್ತು ಕೆೊಲಮ್ ಬಳಸುವ ಅವಶ್ಯಕತೆ ಮನೆಕಟ್ಟುವ ಜಾಗದ ಭೂಮಿಯ ಗಟ್ಟಿತನದ ಮೇಲೆ ಅವಲಂಬಿಸಿರುತ್ತದೆ. ಒಂದುವೇಳೆ ಮನೆಕಟ್ಟುವ ಜಾಗದ ಭೂಮಿ ಗಟ್ಟಿಯಾಗಿದ್ದಲ್ಲಿ ನೀವು ಮನೆಯ ಫೌಂಡೇಶನ್ ಹಾಕುವಾಗ ಫುಟಿಂಗ್ ಮತ್ತು ಕೊಲಮ್ ಬಳಸುವ ಅವಶ್ಯಕತೆ ಇರುವುದಿಲ್ಲ. ಗಟ್ಟಿಮಣ್ಣಿನಲ್ಲಿ ಒಂದು ಮುಕ್ಕಾಲು ಅಗಲಕ್ಕೆ ಎರಡು ಅಡಿ ಆಳದ ತಗ್ಗು ತೆಗೆದು ಅದರಲ್ಲಿ 3 ಇಂಚು ದಪ್ಪದ ಪಿ.ಸಿ.ಸಿ 1:4:8, ಹಾಕಿ ಅದರಮೇಲೆ ಒಂದು ಅಡಿ ಮೂರು ಇಂಚು ಅಗಲದ ಎಸ್.ಎಸ್.ಎಮ್ನಿಮ್ಮ ಮನೆಗೆ ಹೊಂದಿಕೊಂಡು ಬರುವ ರಸ್ತೆಯಿಂದ ನಿಮ್ಮ ಮನೆಯ ಮುಖ್ಯಬಾಗಿಲು ಎರಡೂವರೆ ಅಡಿ ಎತ್ತರಕ್ಕೆ ಬರುವಂತೆ ಕೋಪಿಂಗ್ ಬೀಮ್ ಟೆೋಪ್ ಇಟ್ಟು ಕಟ್ಟಿ ಅದರ ಮೇಲೆ ಗೋಡೆಗಳನ್ನ ಕಟ್ಟಿ ಫೌಡೇಶನ್ ಹಾಕುವಾಗ ಆಗುವ ಖರ್ಚಿನಲ್ಲಿ ಉಳಿತಾಯ ಮಾಡಬಹುದು.
ಮನೆಯ ಕೆೋಣೆಗಳ ಅಳತೆಗಳನ್ನ ನಿರ್ಧರಿಸುವಾಗ, ಮನೆಯ ಗೋಡೆಗಳ ಎತ್ತರ ಮತ್ತು ದಪ್ಪವನ್ನ ನಿರ್ಧರಿಸುವಾಗ, ಸ್ಲಾಬಿನ ದಪ್ಪವನ್ನ ನಿರ್ಧರಿಸುವಾಗ, ತೆಗೆದುಕೊಳ್ಳುವ ಸರಿಯಾದ ನಿರ್ಧಾರ ನೀವು ಮನೆಕಟ್ಟವಾಗ ಒಂದು ಉತ್ತಮ ಮೊತ್ತವನ್ನು ಉಳಿಸಲು ನೆರವಾಗುತ್ತದೆ. ನೀವು ಸ್ಲಾಬಿನ ನಿಗದಿತ ಕಡಿಮೆ ದಪ್ಪವನ್ನ ಇಟ್ಟುಕೊಂಡು ಮನೆ ಕಟ್ಟಬೇಕಾದರೆ ಒಂದ ನಿಯಮವನ್ನು ಪಾಲಿಸಬೇಕಾಗುತ್ತದೆ, ಕೊಣೆಗಳ ಅಳತೆಗಳನ್ನು ನಿಗದಿಮಾಡುವಾಗ ಒನ್ ವೇ ಸ್ಲಾಬಿಗೆ ಹೊಂದುಕೊಳ್ಳುವಂತೆ ಉದ್ದ ಅಗಲಗಳನ್ನು ನಿಗದಿಗೊಳಿಸಬೇಕಾಗುತ್ತದೆ. ಎಲ್ಲಾ ಕೊಣೆಗಳ ಅಗಲ ಹೆಚ್ಚು ಎಂದರೆ ಹತ್ತು ಅಡಿ ಸಿಗುವಂತೆ ಮಾಡಿ, ಅಳತೆ ನಿಗದಿಸಿದರೆ ಸ್ಲಾಬಿನ ನಿಗದಿತ ಕಡಿಮೆ ದಪ್ಪವನ್ನು ಇಟ್ಟುಕೊಂಡು ಮನೆ ಕಟ್ಟಬಹುದು.
ವಾಸ್ತು ಅಳವಡಿಸಿದ ಮನೆಯನ್ನು ನಿರ್ಮಿಸುವಾಗ ಮನೆಯ ಮುಖ್ಯಧ್ವಾರ ಮತ್ತು ಕೆೋಣೆಗಳು ಬರುವ ಸರಿಯಾದ ಜಾಗ ಮನೆಯಲ್ಲಿ ವಾಸಮಾಡುವವರಮೇಲೆ ಉತ್ತಮ ಪ್ರಭಾವ ಬೀರುತ್ತದೆ.
ಇದೆಲ್ಲಾ ಅಂಶಗಳನ್ನು ಗಣನೆಗೆ ತೆಗೆದುಕೊಂಡೇ ಪ್ಲಾನ್ಮಾಡಿದ ಮೂರು ಶಯನ ಕೋಣೆಯನ್ನು ಹೊಂದಿರುವ ಯಾವುದೇ ಜಾಗ ನಿಷ್ಪ್ರಯೋಜಕವಾಗದಂತೆ ತಯಾರಿಸಿದ ನೆಲಮಹಡಿಯ ನಕ್ಷೆ, ಮನೆಯ ಮುನ್ನೋಟ, ಸೀಳುನೋಟ, ಕೀ ಪ್ಲಾನ್ ಇವುಗಳನ್ನ ನೀವು ಈ ಕೆಳಗೆ ನೋಡಬಹುದು.






ಕಾಮೆಂಟ್‌ಗಳು