ವಾಸ್ತು ಅಳವಡಿಸಿದ ಮನೆಯ ನಕ್ಷೆಗಳು
"ವಾಸ್ತು ಅಳವಡಿಸಿ ಮನೆಯ ನಕ್ಷೆಯನ್ನ ತಯಾರಿಸಲು ಕಾರಣ ಮತ್ತು ವಾಸ್ತು ಅಳವಡಿಸಿದ ನಕ್ಷೆಯ ಮಾದರಿಗಳು"
ಮಾನವನ ಬದುಕುವ ರೀತಿ ಪೂರ್ವದಲ್ಲಿ ಹೇಗಿತ್ತು? ಈಗ ಹೇಗಿದೆ? ಇನ್ನೂ ಮುಂದೆ ಹೇಗಿರಬಹುದು? ಎಂದು ಒಮ್ಮೆ ಯೋಚಿಸಿದರೆ ಈಗಾಗಲೇ ಅಜದಿಂದ ಗಜದಷ್ಟು ಪರಿವರ್ತನೆ ಕಂಡ ಇದು ಇನ್ನೂ ಮುಂದೆ ಇನ್ನೇನಕ್ಕೆ ಹೋಲಿಸುವಷ್ಟು ಪರಿವರ್ತನೆ ಕಾಣಬಹುದು? ಒಟ್ಟು ಕುಟುಂಬದ ಬದುಕು ಈಗ ಕಾಣಸಿಗುವುದೇ ಅಪರೂಪವಾಗಿದೆ. ಈ ಬದಲಾವಣೆಗೆ ಕಾರಣಗಳು ಹಲವಿರಬಹುದು. ಆದರೆ ಈ ಒಡಕಿಗೆ ಮೂಲ ಕಾರಣ ಜನರು ಆಧುನಿಕತೆಯಲ್ಲಿ ತಮ್ಮನ್ನು ತಾವು ಕಳೆದುಕೊಂಡಿರುವುದು. ಜನರು ಮೈಮುರಿದು ದುಡಿದು ಅಂಬಲಿ ಉಂಡು ಕಣ್ತುಂಬಾ ನಿದ್ರಿಸುತಿದ್ದ ಆ ಕಾಲವೆಲ್ಲಿ, ಜನರು ಮೈಮುರಿಯದೇ ದುಡಿದು ಮೃಷ್ಠಾಹ್ನ ಉಂಡು ನಿದ್ರೆ ಮಾತ್ರೆ ಸೇವಿಸಿದರೂ ಕಣ್ಮುಚ್ಚಿ ಕ್ಷಣಕಾಲವೂ ನಿದ್ರಿಸಲಾಗದ ಈ ಕಾಲವೆಲ್ಲಿ, ಜನರು ಒತ್ತಡವನ್ನೇ ಮಣಿಸುತ್ತಿದ್ದ ಆ ಕಾಲವೆಲ್ಲಿ, ಒತ್ತಡಕ್ಕೇ ಜನರೇ ಮರಣಿಸುತ್ತಿರುವ ಈ ಕಾಲವೆಲ್ಲಿ, ಇಷ್ಟೆಲ್ಲಾ ಒತ್ತಡ ಅನುಭವಿಸಿಯೇ ಜನರು ಜೀವನಸಾಗಿಸಿದರೂ ಇಲ್ಲಿ ಅವರು ಪಡೆದುಕೊಳ್ಳುತ್ತಿರುವುದು ಒಂದೈಶ್ವರ್ಯ ಮಾತ್ರ, ಆದರೆ ಕಳೆದುಕೊಳ್ಳುತ್ತಿರುವುದು ಉಳಿದ ಸಪ್ತೈಶ್ವರ್ಯಗಳನ್ನು. ಇಂದಿನ ದಿನಮಾನದಲ್ಲಿ ಜನರು ಸುಖಜೀವಕ್ಕೆ ಮೆಟ್ಟಿಲುಗಳಾದ ಆರೋಗ್ಯ ನೆಮ್ಮದಿ ಶಾಂತಿ ಸಹನೆ ಏಕಾಗ್ರತೆ ಇಂದ್ರಿಯನಿಗ್ರಹ ಸತ್ಯ ಇವುಗಳನ್ನೆಲ್ಲಾ ಹತ್ತಿ ಗುರಿತಲುಪುವಷ್ಟರಲ್ಲಿ ಬದುಕಿನ ಕೊನೆಯ ದಿನಗಳನ್ನು ತಲುಪಿರುತ್ತಾನೆ.
ಇಲ್ಲಿ ಜನರು ಜೀವನ ಪರ್ಯಂತ ಸಂಘರ್ಷದ ಬದುಕನ್ನು ಮಾತ್ರ ಯತೇಚ್ಛವಾಗಿ ಅನುಭವಿಸುತ್ತಾರೆ. ಸಂಕಟ ಬಂದಾಗ ಮಾತ್ರ ದೇವರನ್ನು ನೆನೆಯುವುದು ಅಥವಾ ಅನ್ಯಮಾರ್ಗಗಳನ್ನು ಅನುಸರಿಸಿ ಪರಿಹಾರ ಕಂಡುಕೊಳ್ಳುವ ಪ್ರಯತ್ನದಲ್ಲಿ ತೊಡಗುತ್ತಾನೆ. ಆದರೆ ಪ್ರತ್ಯಕ್ಷ ದೇವರೂಪಿ ಪಂಚಭೂತಗಳನ್ನೇ ಮರೆಯುತ್ತಾನೆ.ನೆಲ ಜಲ ವಾಯು ಅಗ್ನಿ ಆಕಾಶ ಇವೇ ಜೀವಿಗಳಿಗೆ ಮೂಲ. ಈ ಪಂಚಭೂತಗಳಿಗೆ ಪ್ರಾಶಸ್ತ್ಯ ಕೊಡುವ ಮೂಲ ಉದ್ದೇಶದಿಂದಾಗಿಯೇ ವಾಸ್ತು ಅಳವಡಿಕೆಯ ವಿಧಿ ಹುಟ್ಟಿಕೊಂಡಿರುವುದು. ವಾಸ್ತು ಅಳವಡಿಸಿದ ಎರಡು ಮಹಡಿಯ ಮನೆಯ ಯಾವುದೇ ಜಾಗ ನಿಷ್ಪ್ರಯೋಜಕವಾಗದೇ ತಯಾರಿಸಿದ ನೆಲಮಹಡಿಯ, ಮೊದಲ ಮಹಡಿಯ ಪ್ಲಾನ್, ಮುಂಬಾಗದ ನೋಟ,ಸೀಳುನೋಟ,ಬುನಾದಿಯ ಸೀಳುನೋಟ ಇವೆಲ್ಲವನ್ನೂ ಒಳಗೊಂಡ ನಕ್ಷೆಗಳು ಎಲ್ಲಾ ವಿವರಣೆಗಳ ಸಹಿತ ಇಲ್ಲಿವೆ ನೋಡಿ.





ಕಾಮೆಂಟ್‌ಗಳು