ಮನೆ ಕಟ್ಟಲು ಸಲಹೆ
ಮನುಷ್ಯ ತನ್ನನ್ನು ತಾನು ಪರಿವರ್ತನೆ ಮಾಡಿಕೊಳ್ಳುತ್ತ ಬಂದ ದಾರಿ ನೋಡಿದರೆ ಮೂಲದಲ್ಲಿ ಹೇಗಿದ್ದವ ಈಗ ಹೇಗಾಗಿದ್ದಾನೆ, ಇನ್ನೂ ಮುಂದುವರಿದು ಇವನು ಎಷ್ಟು ವಿಕಾಸ ಹೊಂದಬಹುದು? ಭೂಮಿಯ ಮೇಲೆ ವಾಸಿಸುವ ಜೀವಪ್ರಪಂಚದಲ್ಲಿ ಮನುಷ್ಯ ಮಾತ್ರ ಅತ್ಯಂತ ವೇಗವಾಗಿ ವಿಕಾಸವಾಗಿರುವುದರ ಹಿಂದೆ ಯಾವ ದೈವೀಶಕ್ತಿ ಅಡಗಿದೆ? ಭೂಮಿಯ ಮೇಲೆ ವಾಸಿಸುವ ಅನ್ಯ ಜೀವಿಗಳಲ್ಲಿ ಇಷ್ಟು ವಿಕಾಸ ಯಾಕಾಗಿಲ್ಲ? ಮಂಗನಿಂದ ಮಾನವ ಅಂದರೆ ಮಂಗನನ್ನು ಹೋಲುತ್ತಿದ್ದ ಮಾನವನಲ್ಲಿ ಆದ ವಿಕಾಸ ಗೋರಿಲ್ಲಾ,ಚಿಂಪಾಂಜಿಗಳಲ್ಲಿ ಯಾಕಾಗುತ್ತಿಲ್ಲ? ಇವು ಯಾವಾಗ ಶೇವ್ ಮಾಡಿ ಅಂಗಿ ಚಡ್ಡಿ ಹಾಕಿ ಒಡಾಡುವುದು? ಮನುಷ್ಯನಿಗಿಂತ ವಿಕಾಸ ಹೊಂದಿದ ಮಿದುಳು ಅಥವಾ ಬುದ್ಧಿಶಕ್ತಿ ಹೊಂದಿದ ಬರೆ ಜೀವ ಸಂಕುಲ ಅನ್ಯ ಗ್ರಹ ಅಥವಾ ನಕ್ಷತ್ರಗಳಲ್ಲಿ ವಾಸವಿರಬಹುದೆ?
ಇವುಗಳೇ ನಾವು ಪೂಜಿಸುವ ದೇವರುಗಳೇ? ಹೀಗೆ ಅದೆಷ್ಟೋ ಪ್ರಶ್ನೆಗಳಿಗೆ ಉತ್ತರ ಇನ್ನೂ ಅಭೇಧ್ಯವಾಗೇ ಉಳಿದ ಸತ್ಯ.
ಮಾನವ ತನಗೆ ಭೂಮಿಯ ಮೇಲೆ ಜೀವಿಸಲು ಬೇಕಾಗುವಂತ ಮಾರ್ಪಾಡುಗಳನ್ನು ತಾನೇ ಮಾಡಿಕೊಳ್ಳುತ್ತ ಬಂದಿದ್ದಾನೆ, ಆದಿಮಾನವರು ಪ್ರಕೃತಿಯ ಸಾಮಾನ್ಯ ಕ್ರಿಯೆಗಳಾದ ಗಾಳಿ,ಮಳೆ,ಬಿಸಿಲು,ರಾತ್ರಿ ಇವುಗಳಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಮರದ ಪೊಟರೆ,ಕಲ್ಲುಗಳ ಸಂದಿ,ಗವಿಗಳಲ್ಲಿ ಆಶ್ರಯ ಪಡೆಯುತ್ತ ಮುಂದುವರಿದು ಮರದ ದೊಡ್ಡ ಎಲೆ ಮತ್ತು ಅವುಗಳಿಂದ ಚಪ್ಪರ,ಬಿದಿರು,ಮರಗಳು, ಮತ್ತದರ ಗರಿಗಳ ಬಳಕೆ, ಮಣ್ಣು ಕಲ್ಲುಗಳ ಬಳಕೆ, ಕಲ್ಲಿನ ಜೊತೆ ಸುಣ್ಣ,ಬೆಲ್ಲ,
ಮಣ್ಣುಗಳ ಮಿಶ್ರಣದ ಬಳಕೆ ಮಾಡುತ್ತಿದ್ದರು. ಹೀಗೆ ಮುಂದೆಮಾರ್ಪಾಡು ಮಾಡಿಕೊಂಡು ಸಿಮೆಂಟ್,ಸ್ಟೀಲ್,ಟೈಲ್ಸ,ಮಾರ್ಬಲ್,ಗ್ರಾನೈಟ್,ಕೃತಕ ಕಲ್ಲುಗಳು ಮತ್ತು ಹಲವು ವಸ್ತುಗಳನ್ನು ಉಪಯೋಗಿಸಿ ಮನೆ,ಮಳಿಗೆಗಳನ್ನು ಕಟ್ಟಿಕೊಂಡು ಜೀವಿಸುತ್ತಿದ್ದಾನೆ.
ಆದಿಯಲ್ಲಿ ಮಾನವರಿಗೆ ತಿಳಿದಿದ್ದು ಎರಡೇ ದಿಕ್ಕು ಒಂದು ಸೂರ್ಯ ಹುಟ್ಟುವ ದಿಕ್ಕು ಇನ್ನೊಂದು ಸೂರ್ಯ ಮುಳುಗುವ ದಿಕ್ಕು, ಅವರು ಸೂರ್ಯ ಚಂದ್ರರನ್ನೇ ಆಧಾರವಾಗಿಟ್ಟುಕೊಂಡೇ ಜೀವಿಸುತ್ತಿದ್ದರು, ಈ ಸತ್ಯ ಅವರಿಗೆ ಆಗಲೇ ಅರಿವಿಗೆ ಬಂದಿತ್ತು. ಇಡೀ ಭೂಮಂಡಲ, ನವಗ್ರಹ ಇವುಗಳಿಗೆಲ್ಲ ಮೂಲ ಆಧಾರಸ್ಥಂಬವೇ ಈ ಸೂರ್ಯ. ಹಾಗೇ ಈ ಭೂಮಿಯ,ನವಗ್ರಹಗಳ ಹುಟ್ಟಿಗೆ ಮೂಲವೇ ಸೂರ್ಯ.
ಸೂರ್ಯನಿಂದ ನಿರ್ಜೀವ ಗ್ರಹಗಳೇ ನಿಗ್ರಹಕ್ಕೊಳಗಾಗಿರುವಾಗ ಅದರಲ್ಲೇ ವಾಸಿಸುವ ಜೀವಿಗಳು ಸೂರ್ಯನಿಗ್ರಹಕ್ಕೊಳಗಾಗದೇ ಇದ್ದಾರೆಯೇ? ಈ ಸೂರ್ಯನಿಗ್ರಹಕ್ಕೊಳಗಾದ ಗ್ರಹಗಳು ಪರಿಧಿಯಲ್ಲಿ ಸುತ್ತುವಾಗ ಇವುಗಳ ಪ್ರಭಾವ ಮನಷ್ಯನಮೆಲೂ ಆಗುತ್ತದೆ. ನಾವು ಎಷ್ಟೇ ಮುಂದುವರಿದಿದ್ದರೂ ಮುಂಬರುವ ಪ್ರಕೃತಿ ವಿಕೋಪಗಳ ಮುನ್ಸೂಚನೆ ಮೊದಲು ತಿಳಿಯುವುದು ಪ್ರಾಣಿಗಳಿಗೇನೆ, ದಿನಂಪ್ರತಿ ಬೆಳಗಾಗುತ್ತದೆ ರಾತ್ರಿಯಾಗುತ್ತದೆ. ಇವು ನಮ್ಮ ಕಣ್ಣಿಗೆ ಕಾಣುವ ಕ್ರಿಯೆ. ಇದಕ್ಕಿಂತ ಹೆಚ್ಚಿನದು ನಮಗೆ ಅನುಭವಕ್ಕೇ ಬರುವುದಿಲ್ಲ.
ಭೂಮಿಯು ಒಂದು ತಾಸಿನಲ್ಲಿ ಸುಮಾರು 1037 ಮೈಲಿ ತನ್ನಸುತ್ತಲೂ ಮತ್ತು ಸುಮಾರು 67000 ಮೈಲಿ ಸೂರ್ಯನಸುತ್ತಲೂ ತಿರುಗುತ್ತದೆ. ಇದು ನಮ್ಮ ಅರಿವಿಗೆ ಬರುತ್ತದೆಯೇ? ನಾವು ದಿನಂಪ್ರತಿ 1632898 ಮೈಲಿ ಚಲಿಸುತ್ತೇವೆ. ನಮಗೇನಾದರೂ ಇದರ ಅರಿವಾಗುತ್ತದೆಯೇ? ಆದರೂ ನಾವು ಇಷ್ಟು ಜೋರಾಗಿ ತಿರುಗುತ್ತಿರುವುದು ಸತ್ಯವಲ್ಲವೇ?
ಈ ಸೂರ್ಯ, ಗ್ರಹಗಳ ಚಲನೆಯನ್ನೇ ಆಧಾರವಾಗಿಟ್ಟುಕೊಂಡೇ ದಿಕ್ಕುಗಳು ಮತ್ತು ಆ ದಿಕ್ಕುಗಳಮೇಲೆ ಅವುಗಳು ಬೀರುವ ಶುಭ ಅಶುಭ ಪ್ರಭಾವವನ್ನು ನಿರ್ಧರಿಸಿರುವುದು,ಈ ಪ್ರಭಾವಗಳು ಕಣ್ಣಿಗೆ ಕಾಣುವುದಿಲ್ಲ ಅನುಭವಿಸಬೇಕಾಗುತ್ತದೆ.
ನಾವು ಈ ಭೂಮಿಯ ಮೇಲೆ ವಾಸಿಸುವ ಎಲ್ಲಾ ಜೀವಿಗಳಿಗಿಂತ ಉತ್ತಮ ಬುದ್ಧಿಶಕ್ತಿ ಹೊಂದಿರುವುದರಿಂದ ದಿಕ್ಕುಗಳಿಂದ ಆಗುವ ಶುಭ ಫಲವನ್ನು ಮಾತ್ರ ಪಡೆದುಕೊಳ್ಳಲು ಶಕ್ತರಿದ್ದೇವೆ.
ಈಗಿನ ದಿನಮಾನದಲ್ಲಿ ಮಾನವ ತಾನು ಈ ಭೂಮಿಯ ಮೇಲೆ ಸುಖವಾಗಿ ಜೀವಿಸಲು ಮುಖ್ಯವಾಗಿ ಎರಡು ಗುರಿಯನ್ನು ತಲುಪಲು ಶತಪ್ರಯತ್ನ ಪಡುತ್ತಾನೆ,ಮೊದಲನೆಯದು ಹಣ ಗಳಿಸುವುದು ಎರಡನೆಯದು ಮನೆ ಕಟ್ಟಿಕೊಳ್ಳುವುದು ಅಥವಾ ಕಟ್ಟಿದನ್ನು ಖರೀದಿಸುವುದು. ಹಣ ಅವನ ಕೈಯಲ್ಲಿ ಜಮಾವಣೆ ಆಗುತ್ತಿದ್ದಂತೆ ತಾನು ವಾಸಿಸಬೇಕಾದ ಮನೆಯ ಆಕಾರ ರೂಪರೇಷೆ ಹೀಗೆ ಇರಬೇಕೆಂದು ತಲೆಯಲ್ಲಿಯೇ ಚಿತ್ರಿಸಿಕೊಳ್ಳಲು ಪ್ರಾರಂಭಿಸುತ್ತಾನೆ. ಹೊಟ್ಟೆಯ ಚಿಂತೆಯನ್ನಾದರೂ ಬಿಡುತ್ತಾನೆ ಆದರೆ ಮನೆಕಟ್ಟುವ ಗುರಿಯನ್ನು ತಲುಪಲು ಪ್ರಯತ್ನಿಸುತ್ತಾನೆ. ಇದೇ ಅವನು ಯೋಚಿಸಿ,ತರ್ಕಿಸಿ,ವಿಚಾರಿಸಿ ಮುಂದಡಿ ಇಡಬೇಕಾದ ಸಮಯ.
ಈ ಮನೆ ಮಳಿಗೆಗಳನ್ನು ಕಟ್ಟುವಾಗ ಮೊದಲನೆಯದಾಗಿ ಬರುವುದೇ ಭೂಮಿಯ ಆಯ್ಕೆ, ಎಲ್ಲಿ,ಹೇಗೆ,ಯಾವ ಜಾಗದಲ್ಲಿ,ಯಾವ ಪರಿಸರದಲ್ಲಿ,ಹೇಗಿದ್ದ ಜಾಗವನ್ನು ಆಯ್ದುಕೊಳ್ಳಬೇಕು?
ಮಾನವ ತನಗೆ ಭೂಮಿಯ ಮೇಲೆ ಜೀವಿಸಲು ಬೇಕಾಗುವಂತ ಮಾರ್ಪಾಡುಗಳನ್ನು ತಾನೇ ಮಾಡಿಕೊಳ್ಳುತ್ತ ಬಂದಿದ್ದಾನೆ, ಆದಿಮಾನವರು ಪ್ರಕೃತಿಯ ಸಾಮಾನ್ಯ ಕ್ರಿಯೆಗಳಾದ ಗಾಳಿ,ಮಳೆ,ಬಿಸಿಲು,ರಾತ್ರಿ ಇವುಗಳಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಮರದ ಪೊಟರೆ,ಕಲ್ಲುಗಳ ಸಂದಿ,ಗವಿಗಳಲ್ಲಿ ಆಶ್ರಯ ಪಡೆಯುತ್ತ ಮುಂದುವರಿದು ಮರದ ದೊಡ್ಡ ಎಲೆ ಮತ್ತು ಅವುಗಳಿಂದ ಚಪ್ಪರ,ಬಿದಿರು,ಮರಗಳು, ಮತ್ತದರ ಗರಿಗಳ ಬಳಕೆ, ಮಣ್ಣು ಕಲ್ಲುಗಳ ಬಳಕೆ, ಕಲ್ಲಿನ ಜೊತೆ ಸುಣ್ಣ,ಬೆಲ್ಲ,ಮಣ್ಣುಗಳ ಮಿಶ್ರಣದ ಬಳಕೆ ಮಾಡುತ್ತಿದ್ದರು. ಹೀಗೆ ಮುಂದೆ ಮಾರ್ಪಾಡುಮಾಡಿಕೊಂಡು ಸಿಮೆಂಟ್,ಸ್ಟೀಲ್,ಟೈಲ್ಸ,ಮಾರ್ಬಲ್,
ಗ್ರಾನೈಟ್,ಕೃತಕ ಕಲ್ಲುಗಳು ಮತ್ತು ಹಲವು ವಸ್ತುಗಳನ್ನು ಉಪಯೋಗಿಸಿ ಮನೆ,ಮಳಿಗೆಗಳನ್ನು ಕಟ್ಟಿಕೊಂಡು ಜೀವಿಸುತ್ತಿದ್ದಾನೆ.
ಆದಿಯಲ್ಲಿ ಮಾನವರಿಗೆ ತಿಳಿದಿದ್ದು ಎರಡೇ ದಿಕ್ಕು ಒಂದು ಸೂರ್ಯ ಹುಟ್ಟುವ ದಿಕ್ಕು ಇನ್ನೊಂದು ಸೂರ್ಯ ಮುಳುಗುವ ದಿಕ್ಕು, ಅವರು ಸೂರ್ಯ ಚಂದ್ರರನ್ನೇ ಆಧಾರವಾಗಿಟ್ಟುಕೊಂಡೇ ಜೀವಿಸುತ್ತಿದ್ದರು, ಈ ಸತ್ಯ ಅವರಿಗೆ ಆಗಲೇ ಅರಿವಿಗೆ ಬಂದಿತ್ತು. ಇಡೀ ಭೂಮಂಡಲ, ನವಗ್ರಹ ಇವುಗಳಿಗೆಲ್ಲ ಮೂಲ ಆಧಾರಸ್ಥಂಬವೇ ಈ ಸೂರ್ಯ. ಹಾಗೇ ಈ ಭೂಮಿಯ,ನವಗ್ರಹಗಳ ಹುಟ್ಟಿಗೆ ಮೂಲವೇ ಸೂರ್ಯ.
ಸೂರ್ಯನಿಂದ ನಿರ್ಜೀವ ಗ್ರಹಗಳೇ ನಿಗ್ರಹಕ್ಕೊಳಗಾಗಿರುವಾಗ ಅದರಲ್ಲೇ ವಾಸಿಸುವ ಜೀವಿಗಳು ಸೂರ್ಯನಿಗ್ರಹಕ್ಕೊಳಗಾಗದೇ ಇದ್ದಾರೆಯೇ? ಈ ಸೂರ್ಯನಿಗ್ರಹಕ್ಕೊಳಗಾದ ಗ್ರಹಗಳು ಪರಿಧಿಯಲ್ಲಿ ಸುತ್ತುವಾಗ ಇವುಗಳ ಪ್ರಭಾವ ಮನಷ್ಯನಮೆಲೂ ಆಗುತ್ತದೆ. ನಾವು ಎಷ್ಟೇ ಮುಂದುವರಿದಿದ್ದರೂ ಮುಂಬರುವ ಪ್ರಕೃತಿ ವಿಕೋಪಗಳ
ಮುನ್ಸೂಚನೆ ಮೊದಲು ತಿಳಿಯುವುದು ಪ್ರಾಣಿಗಳಿಗೇನೆ, ದಿನಂಪ್ರತಿ ಬೆಳಗಾಗುತ್ತದೆ ರಾತ್ರಿಯಾಗುತ್ತದೆ. ಇವು ನಮ್ಮ ಕಣ್ಣಿಗೆ ಕಾಣುವ ಕ್ರಿಯೆ. ಇದಕ್ಕಿಂತ ಹೆಚ್ಚಿನದು ನಮಗೆ ಅನುಭವಕ್ಕೇ ಬರುವುದಿಲ್ಲ.
ಭೂಮಿಯು ಒಂದು ತಾಸಿನಲ್ಲಿ ಸುಮಾರು 1037 ಮೈಲಿ ತನ್ನಸುತ್ತಲೂ ಮತ್ತು ಸುಮಾರು 67000 ಮೈಲಿ ಸೂರ್ಯನಸುತ್ತಲೂ ತಿರುಗುತ್ತದೆ. ಇದು ನಮ್ಮ ಅರಿವಿಗೆ ಬರುತ್ತದೆಯೇ? ನಾವು ದಿನಂಪ್ರತಿ 1632898 ಮೈಲಿ ಚಲಿಸುತ್ತೇವೆ. ನಮಗೇನಾದರೂ ಇದರ ಅರಿವಾಗುತ್ತದೆಯೇ? ಆದರೂ ನಾವು ಇಷ್ಟು ಜೋರಾಗಿ ತಿರುಗುತ್ತಿರುವುದು ಸತ್ಯವಲ್ಲವೇ?
ಈ ಸೂರ್ಯ, ಗ್ರಹಗಳ ಚಲನೆಯನ್ನೇ ಆಧಾರವಾಗಿಟ್ಟುಕೊಂಡೇ ದಿಕ್ಕುಗಳು ಮತ್ತು ಆ ದಿಕ್ಕುಗಳಮೇಲೆ ಅವುಗಳು ಬೀರುವ ಶುಭ ಅಶುಭ ಪ್ರಭಾವವನ್ನು ನಿರ್ಧರಿಸಿರುವುದು,ಈ ಪ್ರಭಾವಗಳು ಕಣ್ಣಿಗೆ ಕಾಣುವುದಿಲ್ಲ ಅನುಭವಿಸಬೇಕಾಗುತ್ತದೆ.
ನಾವು ಈ ಭೂಮಿಯ ಮೇಲೆ ವಾಸಿಸುವ ಎಲ್ಲಾ ಜೀವಿಗಳಿಗಿಂತ ಉತ್ತಮ ಬುದ್ಧಿಶಕ್ತಿ ಹೊಂದಿರುವುದರಿಂದ ದಿಕ್ಕುಗಳಿಂದ ಆಗುವ ಶುಭ ಫಲವನ್ನು ಮಾತ್ರ ಪಡೆದುಕೊಳ್ಳಲು ಶಕ್ತರಿದ್ದೇವೆ.
ಈಗಿನ ದಿನಮಾನದಲ್ಲಿ ಮಾನವ ತಾನು ಈ ಭೂಮಿಯ ಮೇಲೆ ಸುಖವಾಗಿ ಜೀವಿಸಲು ಮುಖ್ಯವಾಗಿ ಎರಡು ಗುರಿಯನ್ನು ತಲುಪಲು ಶತಪ್ರಯತ್ನ ಪಡುತ್ತಾನೆ,ಮೊದಲನೆಯದು ಹಣ ಗಳಿಸುವುದು ಎರಡನೆಯದು ಮನೆ ಕಟ್ಟಿಕೊಳ್ಳುವುದು ಅಥವಾ ಕಟ್ಟಿದನ್ನು ಖರೀದಿಸುವುದು. ಹಣ ಅವನ ಕೈಯಲ್ಲಿ ಜಮಾವಣೆ ಆಗುತ್ತಿದ್ದಂತೆ ತಾನು ವಾಸಿಸಬೇಕಾದ ಮನೆಯ ಆಕಾರ ರೂಪರೇಷೆ ಹೀಗೆ ಇರಬೇಕೆಂದು ತಲೆಯಲ್ಲಿಯೇ ಚಿತ್ರಿಸಿಕೊಳ್ಳಲು ಪ್ರಾರಂಭಿಸುತ್ತಾನೆ. ಹೊಟ್ಟೆಯ ಚಿಂತೆಯನ್ನಾದರೂ ಬಿಡುತ್ತಾನೆ ಆದರೆ ಮನೆಕಟ್ಟುವ ಗುರಿಯನ್ನು ತಲುಪಲು ಪ್ರಯತ್ನಿಸುತ್ತಾನೆ. ಇದೇ ಅವನು ಯೋಚಿಸಿ,ತರ್ಕಿಸಿ,ವಿಚಾರಿಸಿ ಮುಂದಡಿ ಇಡಬೇಕಾದ ಸಮಯ.
ಈ ಮನೆ ಮಳಿಗೆಗಳನ್ನು ಕಟ್ಟುವಾಗ ಮೊದಲನೆಯದಾಗಿ ಬರುವುದೇ ಭೂಮಿಯ ಆಯ್ಕೆ, ಎಲ್ಲಿ,ಹೇಗೆ,ಯಾವ ಜಾಗದಲ್ಲಿ,ಯಾವ ಪರಿಸರದಲ್ಲಿ,ಹೇಗಿದ್ದ ಜಾಗವನ್ನು ಆಯ್ದುಕೊಳ್ಳಬೇಕು?
"ಗೃಹನಿರ್ಮಾಣಕ್ಕೆ ಭೂಮಿ ಖರೀದಿಸುವಾಗ ಅನುಸರಿಸಲೇಬೇಕಾದ ಬಹುಮುಖ್ಯ ಹತ್ತು ನಿಯಮಗಳು"
1)ಭೂಮಿಯ ಮುಖ ಪ್ರಮುಖವಾಗಿ ಪೂರ್ವ,ಪಶ್ಚಿಮ,ಉತ್ತರ,ದಕ್ಷಿಣವಾಗಿರಬೇಕು.
2)ಭೂಮಿ ಪೂರ್ವ,ಉತ್ತರ,ಈಶಾನ್ಯಕ್ಕೆ ಸ್ವಲ್ಪ ಇಳಿಜಾರಾಗಿರಬೇಕು.
3)ಭೂಮಿ ಆಯತಾಕಾರ ಅಥವಾ ಚೌಕಾಕಾರವಾಗಿರಬೇಕು.
4)ಮಣ್ಣು ಗಟ್ಟಿ(ದೃಢ)ಮತ್ತು ಫಲವತ್ತಾಗಿರಬೇಕು.
5)ಭೂಮಿಯ ಅತಿ ಹತ್ತಿರದಲ್ಲಿ ದೇವಾಲಯ,ಆಶ್ರಮ,ಸ್ಮಶಾನ ಇರಬಾರದು.
6)ಹಳೆಯ ಮುಚ್ಚಿದ ಬಾವಿ ಅಥವಾ ಕೆರೆ ಇರಬಾರದು.
7)ಮುಚ್ಚಿದ ಜೀವಂತ ಹುತ್ತ ಇರಬಾರದು.
8)ಹಳೆಯ ಮನೆಯ ಅವಶೇಷವಾದ ಅಡಿಪಾಯ (ಗುಂದ) ಇರಬಾರದು.
9)ಕಡಿದಾದ ಪ್ರಪಾತ ಮತ್ತು ಎತ್ತರದ ಗುಡ್ಡ ಅತಿ ಹತ್ತಿರಕ್ಕೆ ಇರಬಾರದು.
10)ತೆರೆದ ರಾಜಕಾಲುವೆ ಹತ್ತಿರಕ್ಕೆ ಇರಬಾರದು.

ಕಾಮೆಂಟ್‌ಗಳು